Monday, February 24, 2014

गीत सारः- ಗೀತ ಸಾರ- Geeta Saara

पुस्तकं वनिता वित्तं पर-हस्त गतम गतम|
यदि वा पुनरायातम जीर्णं भ्रष्टाच खंडशः||
ಪುಸ್ತಕಂ ವನಿತಾ ವಿತ್ತಂ ಪರ-ಹಸ್ತ ಗತಂ ಗತಂ।
ಯದಿ ವಾ ಪುನರಾಯಾತಂ ಜೀರ್ಣಂ ಭ್ರಷ್ಟಾಚ ಖಂಡಶಃ।।
Pusthakam vanita vittam para-hasta gatam gatam|
yadi vaa punaraayaatam jeerna bhrashtach khandashaha||

ಭಾವಾರ್ಥ :

ಪುಸ್ತಕ ಹೆಣ್ಣು ಮತ್ತು ಹಣ ಪರರ ಕೈಗೆ ಹೋದರೆ ಹೋದಂತೆಯೇ. ಒಂದು ವೇಳೆ ವಾಪಸ್ಸು ಬಂದರೂ ಅವು ಮೊದಲಿನ ಸ್ಥಿತಿಯಲ್ಲಿ ಇರುವುದಿಲ್ಲ. ಪುಸ್ತಕವು ಜೀರ್ಣವಾಗಿರುತ್ತದೆ, ಹೆಣ್ಣು ಭ್ರಷ್ಟಳಾಗಿರುತ್ತಾಳೆ, ಕೊಟ್ಟ ಹಣ ಪೂರ ವಾಪಸು ಬರದೆ ಅರ್ಧಂಬರ್ದ ಬರುತ್ತದೆ.

Paraphrase:

Once you lend a Book, woman or money to someone. It's hard to get it back. Even if you get it back, it wouldn't be the same that we gave. The Book will be spoiled, woman destroyed and half money.

Tuesday, February 18, 2014

Life is a Candy Crush!!! ಲೈಫೂ ಕ್ಯಾಂಡಿ ಕ್ರಶೂ!!!



 










The Candy Crush company(King Digital Entertainment) has gone out to the market with its IPO and here is what I got in my mind when I saw the news:

After all we have compared life with everything we come across in day to day life. Now it's Candy Crush that I have crush with. We can never expect what is going to happen in our own life and likewise you can never expect which candy you gonna get in Candy crush. You expect something and it never happens, but sometimes you never expect and it happens in a magical way. You need your friends support to cross some levels which is as is in life or you will end up paying for it. You fail sometime and pass the other time after several tries. You pass to the next level when you just start a level with an ignorance that you cannot pass it. This is life! This is Candy Crush! :)

Read: Candy Crush Maker Files for an I.P.O.

ಕ್ಯಾಂಡಿ ಕ್ರಶ್ ಯಾರಿಗೆ ಗೊತ್ತಿಲ್ಲ, ಹುಡುಗರಿಂದ ವೃದ್ಧರಾದಿಯಾಗಿ ಇದರಲ್ಲೇ ಮೈಮರೆತಿರುತ್ತಾರೆ. ಈಗ ಈ ಆಟದ ತಯಾರಕ ಕಂಪನಿಯು ಮಾರುಕಟ್ಟೆಗೆ ತನ್ನ ಶೇರ್(IPO) ಬಿಡುಗಡೆ ಮಾಡಿದೆ. ಈ ವಾರ್ತೆಯನ್ನು ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು:

ಜೀವನ ಇದು ಏರು ಪೇರಿನ ಗಾಯನ, ಜೀವನ ಆಟವಿದ್ದಂತೆ, ಜೀವನ ಚೈತ್ರ.....ಹೀಗೆ ಹತ್ತು ಹಲವು ಹೋಲಿಕೆಗಳನ್ನು ನಾವೀಗಾಗಲೇ ನೋಡಿದ್ದಾಗಿದೆ. ಈಗ  ಹೊಸದಾಗಿ ಕ್ಯಾಂಡಿ ಕ್ರಶ್ ಜೊತೆಗಿನ ಹೋಲಿಕೆ. ಜೀವನದಲ್ಲಿ ಏರು ಪೇರುಗಳು ಸರ್ವೇ ಸಾಮಾನ್ಯ, ಮುಂದೆ ಏನಾಗುವುದೋ ಯಾರೂ ಅರಿಯರು.... ಕ್ಯಾಂಡಿ ಕ್ರಶ್ ಕೂಡ ಹಾಗೆ ಮುಂದೆ ಯಾವ ಕ್ಯಾಂಡಿ ಬರುವುದೋ ಯಾರೂ ಅರಿಯರು. ನೀವೇನೋ ಎಣಿಸಿರುತ್ತೀರಿ ಅದು ಮತ್ತೇನೋ ಆಗುವುದು, ನೀವು ಆಗುವುದೇ ಇಲ್ಲ ಅಂದುಕೊಂಡರೆ ಅದು ಪವಾಡ ಎನ್ನಿಸುವಷ್ಟು ಎಲ್ಲವು ನಿಮಗೆ ಬೇಕಾದಂತೆ ಆಗಿರುತ್ತದೆ. ನಿಮ್ಮ ಸ್ನೇಹಿತರಿಲ್ಲದೆ ಜೀವನದಲ್ಲಿ ಮುಂದೆ ಸಾಗಲು ಬಲು ಕಷ್ಟ ಹಾಗೆ ಇಲ್ಲಿ ಕೂಡ ನಿಮ್ಮ ಸ್ನೇಹಿತರ ನೆರವಿಲ್ಲದೆ ಮುಂದೆ ಸಾಗಲಸಾಧ್ಯ. ಬದುಕು ಒಮ್ಮೆ ಬೇಡವೆನ್ನುವಷ್ಟು ದುಸ್ತರ ಒಮ್ಮೊಮ್ಮೆ ಸ್ವರ್ಗ ಸುಖ, ಹಾಗೆಯೇ ಒಂದು ಹಂತವನ್ನು ಮುಗಿಸಲು ಆಗುವುದೇ ಇಲ್ಲ ಎಂದುಕೊಂಡು ಆಟ ಶುರು ಮಾಡಿದರೆ ಅದು ನಮಗೆ ಅರಿವಿಲ್ಲದೇನೆ ಮುಗಿದಿರುತ್ತದೆ. ಇದೇ ಜೀವನ! ಇದೇ ಕ್ಯಾಂಡಿ ಕ್ರಶ್! :)

ಕ್ಯಾಂಡಿ ಕ್ರಶ್ ನ (IPO) ಬಗೆಗಿನ ಲೇಖನ ಇಲ್ಲಿ ಓದಿ

Monday, December 9, 2013

ಘಾಟು ಪದ್ಯ:


ಇದು ನೆನ್ನೆ ಶುಭ ಚಂಪಾ ಷಷ್ಠಿಯ ದಿನ ನಾನು ಕುಕ್ಕೆ ಸುಬ್ರಮಣ್ಯನ ದರ್ಶನ ಮುಗಿಸಿ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಪ್ರಯಾಣಿಸುವಾಗ, ಬಾಗಿಲಿನ ಬಳಿ  ಇರುವ ಸ್ಟೈರ್ ಕೇಸಿನ(ಮೆಟ್ಟಿಲು) ಮೇಲೆ ಬಂದು ನಿಂತಾಗ ನನ್ನ ತಲೆಗೆ ಹೊಳೆದ ಪದ್ಯ.

ಬದುಕು ಘಾಟ್ ಸೆಕ್ಷನ್ನು ಡ್ರೈವರ್ ಅದರ ಸಾಹೇಬ।।
ಪ್ಯಾಸೆಂಜರ್ ನೀ ಅವನು ಹೇಳ್ದಂತೆ ಓಲಾಡು।।
ದುರ್ಗಕೊ ಹಾಸ್ಪಿಟಲ್ಗೊ ಹೋಗೆಂದ ಕಡೆಗೋಡು।।
ಕೇಸ್(ಸ್ಟೈರ್ ಕೇಸ್) ಕುಸಿಯೆ ನೆಲವಿಹುದು ಸೂರ್ಯತಿಮ್ಮ ।।

ವ್ಯಾಖ್ಯೆ:
ಬದುಕು ಘಾಟ್ ಸೆಕ್ಷನ್ನಿನ್ನಂತೆ, ಒಮ್ಮೆ ಮೇಲೆರುತ್ತೇವೆ ಮತ್ತೊಮ್ಮೆ ಕೆಳಗೆ. ಮೇಲೇರಿದಾಗ ಸಂತೋಷಪಡುತ್ತೇವೆ ಕೆಳಗೆ ಇಳಿದಾಗ ದುಖಿ:ಸುತ್ತೇವೆ. ಆದರೆ ಬಸ್ಸನ್ನು ಡ್ರೈವ್ ಮಾಡುತ್ತಿರುವ ಡ್ರೈವರನಿಗೆ ಬಸ್ ಹೇಗೆ ಚಲಿಸುತ್ತದೆ ಎನ್ನುವುದು ಚೆನ್ನಾಗಿ ಗೊತ್ತು ಆದರೂ ಅವನು ನಿರ್ಭಾವುಖನಾಗಿ ತನ್ನ ಕೆಲಸ ತಾನು ಮಾಡುತ್ತಿರುತ್ತಾನೆ. ಅವನು ನಮ್ಮನ್ನು ಚಿತ್ರದುರ್ಗಕ್ಕೆ ಸುರಕ್ಷೆಯಾಗಿ ಕರೆದೊಯ್ಯಬಲ್ಲನು ಅಥವಾ ಆಸ್ಪತ್ರೆಗೂ ಸೇರಿಸಬಲ್ಲನು. ಆದರೂ ನಮಗೆ ಇರಬೇಕಾದ ನಂಬಿಕೆಯೊಂದೇ, ಸ್ಟೈರ್ ಕೇಸ್ ಕುಸಿದರು ನೆಲದ ಮೇಲೆ ಬಿದ್ದು ಬದುಕಬಹುದು.

-ಸೂಪ್ರ