The Candy Crush company(King Digital Entertainment) has gone out to the market with its IPO and here is what I got in my mind when I saw the news:
Read: Candy Crush Maker Files for an I.P.O.
ಕ್ಯಾಂಡಿ ಕ್ರಶ್ ಯಾರಿಗೆ ಗೊತ್ತಿಲ್ಲ, ಹುಡುಗರಿಂದ ವೃದ್ಧರಾದಿಯಾಗಿ ಇದರಲ್ಲೇ ಮೈಮರೆತಿರುತ್ತಾರೆ. ಈಗ ಈ ಆಟದ ತಯಾರಕ ಕಂಪನಿಯು ಮಾರುಕಟ್ಟೆಗೆ ತನ್ನ ಶೇರ್(IPO) ಬಿಡುಗಡೆ ಮಾಡಿದೆ. ಈ ವಾರ್ತೆಯನ್ನು ಓದಿದಾಗ ನನ್ನ ಮನಸ್ಸಿಗೆ ಹೊಳೆದದ್ದು:
ಜೀವನ ಇದು ಏರು ಪೇರಿನ ಗಾಯನ, ಜೀವನ ಆಟವಿದ್ದಂತೆ, ಜೀವನ ಚೈತ್ರ.....ಹೀಗೆ ಹತ್ತು ಹಲವು ಹೋಲಿಕೆಗಳನ್ನು ನಾವೀಗಾಗಲೇ ನೋಡಿದ್ದಾಗಿದೆ. ಈಗ ಹೊಸದಾಗಿ ಕ್ಯಾಂಡಿ ಕ್ರಶ್ ಜೊತೆಗಿನ ಹೋಲಿಕೆ. ಜೀವನದಲ್ಲಿ ಏರು ಪೇರುಗಳು ಸರ್ವೇ ಸಾಮಾನ್ಯ, ಮುಂದೆ ಏನಾಗುವುದೋ ಯಾರೂ ಅರಿಯರು.... ಕ್ಯಾಂಡಿ ಕ್ರಶ್ ಕೂಡ ಹಾಗೆ ಮುಂದೆ ಯಾವ ಕ್ಯಾಂಡಿ ಬರುವುದೋ ಯಾರೂ ಅರಿಯರು. ನೀವೇನೋ ಎಣಿಸಿರುತ್ತೀರಿ ಅದು ಮತ್ತೇನೋ ಆಗುವುದು, ನೀವು ಆಗುವುದೇ ಇಲ್ಲ ಅಂದುಕೊಂಡರೆ ಅದು ಪವಾಡ ಎನ್ನಿಸುವಷ್ಟು ಎಲ್ಲವು ನಿಮಗೆ ಬೇಕಾದಂತೆ ಆಗಿರುತ್ತದೆ. ನಿಮ್ಮ ಸ್ನೇಹಿತರಿಲ್ಲದೆ ಜೀವನದಲ್ಲಿ ಮುಂದೆ ಸಾಗಲು ಬಲು ಕಷ್ಟ ಹಾಗೆ ಇಲ್ಲಿ ಕೂಡ ನಿಮ್ಮ ಸ್ನೇಹಿತರ ನೆರವಿಲ್ಲದೆ ಮುಂದೆ ಸಾಗಲಸಾಧ್ಯ. ಬದುಕು ಒಮ್ಮೆ ಬೇಡವೆನ್ನುವಷ್ಟು ದುಸ್ತರ ಒಮ್ಮೊಮ್ಮೆ ಸ್ವರ್ಗ ಸುಖ, ಹಾಗೆಯೇ ಒಂದು ಹಂತವನ್ನು ಮುಗಿಸಲು ಆಗುವುದೇ ಇಲ್ಲ ಎಂದುಕೊಂಡು ಆಟ ಶುರು ಮಾಡಿದರೆ ಅದು ನಮಗೆ ಅರಿವಿಲ್ಲದೇನೆ ಮುಗಿದಿರುತ್ತದೆ. ಇದೇ ಜೀವನ! ಇದೇ ಕ್ಯಾಂಡಿ ಕ್ರಶ್! :)
ಕ್ಯಾಂಡಿ ಕ್ರಶ್ ನ (IPO) ಬಗೆಗಿನ ಲೇಖನ ಇಲ್ಲಿ ಓದಿ

No comments:
Post a Comment